Loading

wait a moment

ಮಾಲ್ಡೀವ್ಸ್ ನಲ್ಲಿ ನರೇಂದ್ರ ಮೋದಿ : ಅಧ್ಯಕ್ಷ ಇಬ್ರಾಹಿಂಗೆ ಕ್ರಿಕೆಟ್ ಬ್ಯಾಟ್ ಉಡುಗೊರೆ

ಮಾಲೆ, ಜೂನ್ 08 : ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ದಿಗ್ವಿಜಯ ಸಾಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು, ನೆರೆ ರಾಷ್ಟ್ರವಾಗಿರುವ ಮಾಲ್ಡೀವ್ಸ್ ಗೆ ಶನಿವಾರ ಆಗಮಿಸಿದ್ದು, ಅಲ್ಲಿರುವ ಭಾರತೀಯ ಸಮುದಾಯದಿಂದ ಭರ್ಜರಿ ಸ್ವಾಗತ ದೊರೆತಿದೆ.

ನೆರೆಹೊರೆಯ ರಾಷ್ಟ್ರಗಳೊಂದಿಗೆ ಭ್ರಾತೃತ್ವ ವೃದ್ಧಿಸುವ ಉದ್ದೇಶದಿಂದ ನರೇಂದ್ರ ಮೋದಿಯವರು ಮೊದಲಿಗೆ ಮಾಲ್ಡೀವ್ಸ್ ದೇಶವನ್ನು ಆರಿಸಿಕೊಂಡಿದ್ದು, ಎರಡು ದಿನಗಳ ಭೇಟಿಯ ನಂತರ ಶ್ರೀಲಂಕಾಗೆ ತೆರಳಲಿದ್ದಾರೆ.

ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ, ಅಪಾರ ಕ್ರಿಕೆಟ್ ಪ್ರೇಮಿಯಾಗಿರುವ ಇಬ್ರಾಹಿಂ ಅವರಿಗೆ ಮೋದಿಯವರು, ಭಾರತದ ಕ್ರಿಕೆಟ್ ತಂಡ ಆಟಗಾರರು ಸಹಿ ಹಾಕಿರುವ ಕ್ರಿಕೆಟ್ ಬ್ಯಾಟನ್ನು ವಿಶೇಷ ಉಡುಗೊರೆಯಾಗಿ ನೀಡಿದರು.

ರಕ್ಷಣೆಗೆ ಸಂಬಂಧಿಸಿದ ದ್ವಿಪಕ್ಷೀಯ ಒಪ್ಪಂದಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಯಾವುದೇ ರೀತಿಯಲ್ಲಿ ಮಾಲ್ಡೀವ್ಸ್ ಗೆ ಸಹಾಯ ಮಾಡಲು ಭಾರತ ಬದ್ಧವಾಗಿದೆ. ಎರಡೂ ರಾಷ್ಟ್ರಗಳ ನಡುವಿನ ಗೆಳೆತನ ಇನ್ನಷ್ಟು ಗಟ್ಟಿಗೊಳಿಸಲು ವ್ಯಾಪಾರ, ಬಂದರು, ಸ್ವಚ್ಛತೆ, ಕ್ರಿಕೆಟ್, ಮೀನುಗಾರಿಕೆ, ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮೋದಿ ತಿಳಿಸಿದರು.

ನರೇಂದ್ರ ಮೋದಿಯವರು 2018ರ ನವೆಂಬರ್ ನಲ್ಲಿ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದ ಸಂದರ್ಭದಲ್ಲಿ ಮಾಲ್ಡೀವ್ಸ್ ಗೆ ಭೇಟಿ ನೀಡಿದ್ದರು. ಕಳೆದ 8 ವರ್ಷಗಳಲ್ಲಿ ಮಾಲ್ಡೀವ್ಸ್ ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿರುವ ಮೊದಲ ಪ್ರಧಾನಿ ಮೋದಿಯವರಾಗಿದ್ದಾರೆ.

ಅತ್ಯುನ್ನತ ಗೌರವ ಪ್ರದಾನ : ಈ ಸಂದರ್ಭದಲ್ಲಿ, ವಿದೇಶಿ ಮುಖಂಡರಿಗೆ ನೀಡಲಾಗುವ ಮಾಲ್ಡೀವ್ಸ್ ನ ಅತ್ಯುನ್ನತ ಗೌರವವಾದ ‘ರೂಲ್ ಆಫ್ ನಿಶಾನ್ ಇಜ್ಜುದ್ದೀನ್’ ಅನ್ನು ನರೇಂದ್ರ ಮೋದಿಯವರಿಗೆ ನೀಡಲಾಯಿತು. ಈ ಗೌರವ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ ಮೋದಿಯವರು, ಇದು ಪ್ರತಿ ಭಾರತೀಯನಿಗೆ ನೀಡಲಾದ ಗೌರವ ಎಂದು ಪ್ರಶಂಸಿಸಿದರು. ನರೇಂದ್ರ ಮೋದಿಯವರು ಮಾಲ್ಡೀವ್ಸ್ ನ ಸಂಸತ್ತು ಮಜಲಿಸ್ ನಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ರಾಷ್ಟ್ರದ ಹಲವಾರು ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

Leave a Reply

Your email address will not be published. Required fields are marked *