Loading

wait a moment

ಓಂ’ ಮತ್ತು ‘ಗೋವು’ ಎಂದರೆ ಕೆಲವರಿಗೆ ಸಿಟ್ಟು ಬರುತ್ತದೆ: ಮೋದಿ

ಮಥುರಾ, ಸೆಪ್ಟೆಂಬರ್ 11: ”ಓಂ’ ಮತ್ತು ಗೋವು ಎಂದು ಕೆಲವರಿಗೆ ಹೇಳಿದರೆ ಕೆಲವರಿಗೆ ಸಿಟ್ಟು ಬರುತ್ತದೆ, ದೇಶ ಇನ್ನೂ 16ನೇ ಶತಮಾನದಲ್ಲಿದೆ ಎಂಬಂತೆ ಭಾವಿಸುತ್ತಾರೆ’ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದರು.

ಉತ್ತರ ಪ್ರದೇಶದ ಮಥುರಾ ನಲ್ಲಿ ಇಂದು ರಾಷ್ಟ್ರೀಯ ಪ್ರಾಣಿಗಳ ಕಾಯಿಲೆ ನಿಯಂತ್ರಣ ಕಾರ್ಯಕ್ರಮ (ಎನ್‌ಎಡಿಡಿಸಿಪಿ) ಕ್ಕೆ ಚಾಲನೆ ನೀಡಿ ಮೋದಿ ಮಾತನಾಡಿದರು

ಎನ್‌ಎಡಿಡಿಸಿಪಿ ಕಾರ್ಯಕ್ರಮದಡಿ ಹಸು, ಎತ್ತು, ಕುರಿ, ಆಡು, ಹಂದಿ ಇನ್ನಿತರೆ 50 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಪ್ರಾಣಿಗಳನ್ನು ಕಾಲು ಮತ್ತು ಬಾಯಿ ರೋಗದಿಂದ ಕಾಪಾಡಲು ಈ ಕ್ರಮಕ್ಕೆ ಮುಂದಾಗಲಾಗಿದೆ.

ಇದೇ ಸಮಯದಲ್ಲಿ ಭಯೋತ್ಪಾದನೆಯ ಬಗ್ಗೆಯೂ ಮಾತನಾಡಿದ ಅವರು, ಭಯೋತ್ಪಾದನೆಯನ್ನು ಏಕಾಂಗಿಯಾಗಿ ಎದುರಿಸುವ ಶಕ್ತಿಯನ್ನು ಭಾರತ ಹೊಂದಿದೆ ಎಂದರು.

Leave a Reply

Your email address will not be published. Required fields are marked *