Loading

wait a moment

ದುರ್ಗಾ ಮಾತಾ ದೇಗುಲ ಧ್ವಂಸ: ದೆಹಲಿ ಪೊಲೀಸ್​ ಆಯುಕ್ತರಿಗೆ ಸಮನ್ಸ್​ ನೀಡಿದ ಗೃಹಸಚಿವ ಅಮಿತ್​ ಷಾ!

ನವದೆಹಲಿ: ದೆಹಲಿಯ ಕೇಂದ್ರದಲ್ಲಿರುವ ಚಾಂದನಿ ಚೌಕ್​ನ ದುರ್ಗಾ ಮಾತಾ ದೇವಾಲಯ ಧ್ವಂಸಕ್ಕೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಗೃಹ ಸಚಿವ ಅಮಿತ್​ ಷಾ ಅವರು ಬುಧವಾರ ದೆಹಲಿ ಪೊಲೀಸ್ ಆಯುಕ್ತ ಅಮುಲ್ಯಾ ಪಟ್ನಾಯಕ್​ ಅವರಿಗೆ ಸಮನ್ಸ್​ ಜಾರಿ ಮಾಡಿದ್ದಾರೆ.

ಜೂ.30ರ ಸಂಜೆ ಅನ್ಯಕೋಮಿನ ಯುವಕರು ದೇಗುಲವನ್ನು ನಾಶ ಮಾಡಿದ್ದಾರೆ. ಈ ಬಗ್ಗೆ ಇನ್ನೂ ಕ್ರಮ ಕೈಗೊಳ್ಳದ ಪೊಲೀಸರ ಕ್ರಮವನ್ನು ಅಮಿತ್​ ಷಾ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಹಳೇ ದೆಹಲಿಯ ಹೌಜ್​ ಖಾಜಿ ಪ್ರದೇಶದಲ್ಲಿ ಪಾರ್ಕಿಂಗ್​ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ ಶುರುವಾಗಿತ್ತು. ಬಳಿಕ ಸುಮಾರು 300-400 ಜನರ ಗುಂಪೊಂದು ಅಲ್ಲಿನ 100 ವರ್ಷಗಳಷ್ಟು ಹಳೆಯ ದುರ್ಗಾ ಮಾತಾ ದೇವಾಲಯಕ್ಕೆ ನುಗ್ಗಿ ಅದನ್ನು ಧ್ವಂಸಗೊಳಿಸಿತ್ತು.

ನಾನು ಗೃಹ ಸಚಿವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ವಿವರಣೆ ನೀಡಿದ್ದೇನೆ ಎಂದು ದೆಹಲಿ ಪೊಲೀಸ್​ ಆಯುಕ್ತ ಅಮುಲ್ಯಾ ಪಟ್ನಾಯಕ್​ ತಿಳಿಸಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಮೂವರನ್ನು ಬಂಧಿಸಿದ್ದ ಪೊಲೀಸರು ಬುಧವಾರ ಇನ್ನೊಬ್ಬನನ್ನು ಬಂಧಿಸಿದ್ದಾರೆ. ಒಟ್ಟು ನಾಲ್ವರಲ್ಲಿ ಓರ್ವ ಅಪ್ರಾಪ್ತ ಎನ್ನಲಾಗಿದೆ. ಹಾಗೇ ಹೌಜಿ ಖಾಜಿ ಪ್ರದೇಶದಲ್ಲಿ ಈಗ ಪರಿಸ್ಥಿತಿ ತಹಬದಿಗೆ ಬಂದಿದೆ ಎಂದು ಅಮುಲ್ಯಾ ತಿಳಿಸಿದ್ದಾರೆ.

ದೇಗುಲ ಧ್ವಂಸಕ್ಕೆ ಸಂಬಂಧಪಟ್ಟಂತೆ ಇಂದು ಕಾಂಗ್ರೆಸ್​ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿತ್ತು. ಟ್ವೀಟ್​ ಮಾಡಿದ್ದ ಅಭಿಷೇಕ್​ ಸಿಂಘ್ವಿ, ದೆಹಲಿಯಲ್ಲಿ ನಡೆದ ಘಟನೆ ಬಗ್ಗೆ ಅಮಿತ್​ ಷಾ ಇನ್ನೂ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದರು.

ಬಿಜೆಪಿ ಅಲ್ಪಸಂಖ್ಯಾತರ ವಿಷಯದಲ್ಲಿ ಯಾವತ್ತೂ ಕಾಳಜಿ ತೋರಿಸುವುದಿಲ್ಲ ಎಂಬುದು ಗೊತ್ತಿದೆ. ಆದರೆ, ಇದು ಬಹುಸಂಖ್ಯಾತರಿಗೆ ಸಂಬಂಧಪಟ್ಟಿದ್ದಲ್ಲವೇ? ಈಗಲೂ ಆಸಕ್ತಿ ವಹಿಸುವುದಿಲ್ಲವೇ ಎಂದು ವ್ಯಂಗ್ಯವಾಡಿದ್ದರು.

Leave a Reply

Your email address will not be published. Required fields are marked *