ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಇನ್ಮುಂದೆ ತಿಂಡಿ-ಊಟ ದುಬಾರಿ ಯಾಕೆ?

ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಲಿದೆ. ಮುಂದಿನ ಬಾರಿ ನೀವು ರೈಲಿನಲ್ಲಿ ಪ್ರಯಾಣಿಸುವಾಗ ಕಾಫಿ-ಟೀ ಅಥವಾ ಊಟಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಪ್ರವಾಸೋದ್ಯಮ ನಿರ್ದೇಶಕರು ಮತ್ತು ರೈಲ್ವೆ ಮಂಡಳಿಯ ಅಡುಗೆ ವಿಭಾಗ ಗುರುವಾರ ಹೊರಡಿಸಿರುವ ಸುತ್ತೋಲೆಯ ಪ್ರಕಾರ ರಾಜಧಾನಿ, ಶತಾಬ್ದಿ, ಡುರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ಹಣ ಪಡೆದು ಪಾವತಿಸಲಾಗುವ ಆಹಾರದ ಬೆಲೆಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದೆ.

ರಾಜಧಾನಿ, ಶತಾಬ್ದಿ, ಡುರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ದರ ಪರಿಷ್ಕರಣೆಯ ಬಳಿಕ ಒಂದು ಕಪ್ ಟೀ ಬೆಲೆ 10 ರುಪಾಯಿಯಿಂದ 20ಕ್ಕೆ ಏರಿಕೆಯಾಗಲಿದೆ. ಡೊರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟ 80 ರುಪಾಯಿಯಿಂದ 120 ರುಪಾಯಿಗೆ ಏರಿಕೆಯಾಗಲಿದೆ. ಸಂಜೆ ನೀಡಲಾಗುವ ಟೀ ಬೆಲೆಯು ಮತ್ತಷ್ಟು ದುಬಾರಿಯಾಗಲಿದ್ದು, 20 ರಿಂದ 50 ರುಪಾಯಿಗೆ ಪರಿಷ್ಕರಣೆಯಾಗಲಿದೆ. 14 ವರ್ಷಗಳ ಬಳಿಕ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಆಹಾರದ ದರ ಹೆಚ್ಚಿನ ಮಟ್ಟದಲ್ಲಿ ಪರಿಷ್ಕೃತವಾಗುತ್ತಿದೆ. ಈ ಪರಿಷ್ಕೃತ ದರಗಳನ್ನು ಟಿಕೆಟಿಂಗ್ ವ್ಯವಸ್ಥೆಯಲ್ಲಿ 15 ದಿನಗಳಲ್ಲಿ ನವೀಕರಿಸಲಾಗುವುದು ಮತ್ತು 120 ದಿನಗಳ ನಂತರ ಅನ್ವಯವಾಗಲಿದೆ.

ರಾಜಧಾನಿ, ಶತಾಬ್ದಿ, ಡುರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ತಿಂಡಿ-ಊಟ ಪರಿಷ್ಕೃತ ದರ ಹೇಗಿದೆ ಎಂಬುದರ ವಿವರಣೆ ಈ ಕೆಳಗಿದೆ. ರಾಜಧಾನಿ, ಶತಾಬ್ದಿ, ಡುರೊಂಟೊ ಎಕ್ಸ್‌ಪ್ರೆಸ್‌, ಫಸ್ಟ್ ಕ್ಲಾಸ್ ಎಸಿ (First class AC/EC)
ಸದ್ಯದ ದರ ಬದಲಾವಣೆ ದರ. ಬೆಳಗ್ಗಿನ ಟೀ 15 – 35, ತಿಂಡಿ 90 – 140,  ಊಟ 145 – 245, ಸಂಜೆ ಟೀ 75 -140.

ಇನ್ನು ಪಕ್ಷ ಬಿಟ್ಟು ಹೋಗುತ್ತೇನೆ ಅಂದವರನ್ನು ಹಿಡಿದಿಡಲು ಆಗುತ್ತಾ(?) ರಾಷ್ಟ್ರಪತಿ ಆಳ್ವಿಕೆ ಬಂದರೆ ಜನರನ್ನು ನೋಡುವವರು ಯಾರು(?) ನಾ ಯಾರಿಗೋ ಹೆದರಿ ಈ ರೀತಿ ಹೇಳಿಕೆ ನೀಡಲ್ಲ. ನೆರೆ ವಿಚಾರದಲ್ಲಿ ಬಿಜೆಪಿಯವರ ಕೆಲಸವೂ ನಂಗೆ ತೃಪ್ತಿ ಆಗಿಲ್ಲ. ನನ್ನ ಜನರನ್ನು ಯಾರು ಉಳಿಸುತ್ತಾರೆ ಅಂತಹವರಿಗೆ ಬೆಂಬಲ ಕೊಡುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಬಿಜೆಪಿ ಬೆಂಬಲಕ್ಕೆ ಸೂಚನೆ ನೀಡಿದ್ದಾರೆ. 2006ರಲ್ಲಿ ತಂದೆಯ ವಿರುದ್ಧ ವಾಗಿ ರಾಜಕಾರಣದಲ್ಲಿ ತೆಗೆದುಕೊಂಡೆ. ಪಕ್ಷ ಉಳಿಸಿಕೊಳ್ಳಲು ನಾನು ಅವರ ಜೊತೆ ಸೇರಿದೆ. ತಂದೆಯ ಮಾತಿಗೆ ಬೆಲೆ ಕೊಟ್ಟು ಕಾಂಗ್ರೆಸ್ ಜೊತೆ ಮಾತನಾಡಿದೆ ಎಂದು ಅವರು ತಮ್ಮ ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿದರು.

ಯಾರು ನನ್ನ ಜನರನ್ನು ಉಳಿಸುತ್ತಾರೋ ಆ ಮುಖ್ಯಮಂತ್ರಿಗೆ ನಾನು ಬೆಂಬಲ ಕೊಡುತ್ತೇನೆ. ಆದರೆ, ಬಿಎಸ್​ ಯಡಿಯೂರಪ್ಪ ಅವರು ಬೆಂಬಲ ಕೊಡುತ್ತೇನೆ ಎಂದು ನಾನು ಹೇಳಿಲ್ಲ. ನಾನು ಹೇಳಿದ ರೀತಿ ನನ್ನ ಜನರಿಗೆ ಪರಿಹಾರ ನೀಡಿದರೆ ಸಿದ್ದರಾಮಯ್ಯ ಗೂ ಬೆಂಬಲ ಕೊಡುತ್ತೇನೆ ಎಂದು ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.

Leave a Reply

Your email address will not be published. Required fields are marked *