ಕೆಲಸದ ಕೊನೆಯ ದಿನ; ಮಹಾತ್ಮಾ ಗಾಂಧಿಗೆ ವಂದಿಸಿದ ಸಿಜೆಐ ರಂಜನ್​ ಗೊಗೊಯ್​!

ಭಾರತದ ಮಹಾ ಕಗ್ಗಂಟೆನ್ನಿಸಿಕೊಂಡಿದ್ದ ಅಯೋಧ್ಯೆ ಭೂ ವಿವಾದ ಯಾವುದೇ ಗಲಾಟೆ, ಗಲಭೆ ಅಥವಾ ಪ್ರತಿಭಟನೆಗಳಿಲ್ಲದೆ ಅಂತ್ಯ ಕಂಡಿತು. ಭಾರತದ ಪಾಲಿಗೆ ಅಯೋಧ್ಯೆ ಭೂ ವಿವಾದ ಬಗೆಹರಿದದ್ದು ನಿಜಕ್ಕೂ ಅತ್ಯಂತ ಸಂತಸದ ವಿಷಯವಾಗಿತ್ತು. ಇಂಥ ವಿವಾದದ ಕುರಿತು ತೀರ್ಪು ಕೊಡುವ ಮೂಲಕ ರಂಜನ್ ಗೊಗೊಯ್ ಈಗ ಇಡೀ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂದು ರಂಜನ್ ಗೊಗೊಯ್ ಅವರು ಸಿಜೆಐ ಆಗಿ ಸುಪ್ರೀಂ ಕೋರ್ಟ್​ನಲ್ಲಿ ಕಾರ್ಯ ನಿರ್ವಹಿಸುವ ಕೊನೆಯ ದಿನವಾಗಿತ್ತು. ಇದೇ ತಿಂಗಳ 17 ರಂದು ರಂಜನ್​ ಗೊಗೊಯ್ ತಮ್ಮ ವೃತ್ತಿಯಿಂದ ನಿವೃತ್ತರಾಗಲಿದ್ದಾರೆ. ಹೀಗಾಗಿ ಇಂದು ರಾಜ್​ಘಾಟ್​ಗೆ ತೆರಳಿದ್ದ ರಂಜನ್ ಗೊಗೊಯ್ ಮಹಾತ್ಮಾ ಗಾಂಧಿಯವರ ಸ್ಮಾರಕಕ್ಕೆ ವಂದಿಸಿದರು. 

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಅಕ್ಟೋಬರ್ 24ರಂದು ಬಂದಿದ್ದರೂ, ಇದುವರೆಗೂ ಸರ್ಕಾರ ರಚನೆಯಾಗಿಲ್ಲ. ಶಿವಸೇನೆ ಮತ್ತು ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿಗೆ ಬಹುಮತ ಸಿಕ್ಕರೂ ಸರ್ಕಾರ ರಚನೆ ಕಗ್ಗಂಟಾಗಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರುವಂತೆ ಜನಾದೇಶ ಬಂದಿದೆ. ವಿಪಕ್ಷದಲ್ಲಿಯೇ ಕುಳಿತುಕೊಳ್ಳುತ್ತೇವೆಯೇ ಹೊರತು ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಸಂಜಯ್ ರಾವತ್, ನಮಗೆ 170 ಶಾಸಕರ ಬೆಂಬಲವಿದೆ ಎಂಬ ಹೇಳಿಕೆ ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

2014ರ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದವು. ಶಿವಸೇನೆ 63 ಮತ್ತು ಬಿಜೆಪಿ 122 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ನಂತರ ಎರಡೂ ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಾಗಿತ್ತು. 2019ರಲ್ಲಿ ಬಿಜೆಪಿ ಚುನಾವಣೆ ಪೂರ್ವದಲ್ಲಿಯೇ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಇತ್ತ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿ ರಚನೆ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದವು. ಬಿಜೆಪಿ 105, ಶಿವಸೇನೆ, 56, ಎನ್‌ಸಿಪಿ 54, ಕಾಂಗ್ರೆಸ್ 44 ಮತ್ತು ಇತರರು 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.  

ರಾಜ್ಯದಲ್ಲಿ ಮೈತ್ರಿ ಸರಕಾರ ಪತನಗೊಳಿಸಿ ಅಧಿಕಾರದ ಚುಕ್ಕಾಣಿ ಹಿಡಿದ ಜನಪರ ನಾಯಕ ಮಾನ್ಯ ಬಿ ಎಸ್ ಯಡಿಯೂರಪ್ಪನವರು ಅನೇಕ ಯೋಜನೆಗಳ ಮೂಲಕ ಜನರ ಆತ್ಮ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ, ಹೌದು ಅಧಿಕಾರ ಏರಿದ ದಿನದಿಂದ ನೇಕಾರರ, ಮೀನುಗಾರರ ಸಾಲ‌ಮನ್ನಾ ಹಾಗೂ ಟಿಪ್ಪು ಜಯಂತಿ ಹೀಗೆ ದಿನಾ ಒಂದರಂತೆ ರಾಜ್ಯದ ಜನತೆಗೆ ಸಿಹಿ ಸುದ್ದಿಗಳ ಸರಮಾಲೆ ನೀಡುತ್ತಿದ್ದಾರೆ.

ಪ್ರತೀ ವರ್ಷ ದೀಪಾವಳಿ ಹಬ್ಬಕ್ಕೆ ಸರ್ಕಾರಿ ನೌಕರರಿಗೆ ಒಂದಲ್ಲ ಒಂದು ಸಿಹಿ ಸುದ್ದಿ ಕಾದಿರುತ್ತೆ ಹಾಗಾಗಿ ಈ ವರ್ಷವೂ ಕೂಡ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ದೊರಕಿದೆ. ಹೌದು ಕಳೆದ ವಾರವಷ್ಟೇ ಉತ್ತರ ಪ್ರದೇಶದಲ್ಲಿ ಸರ್ಕಾರಿ ನೌಕರರಿಗೆ ಸಂಬಳದ ಜೊತೆ ಬೋನಸ್ ಅಡ್ವಾನ್ಸ್ ಆಗಿ ನೀಡಿದ್ದಾರೆ ಯೋಗೀ ಆದಿತ್ಯನಾಥ್ ಇದೀಗ ಅವರ ಮಾದರಿಯಂತೆ ಮಾನ್ಯ ಯಡಿಯೂರಪ್ಪನವರು ಸರ್ಕಾರಿ ನೌಕರರಿಗೆ ಸಂಬಳ ಹೆಚ್ಚಿಸಿದ್ದಾರೆ.

Leave a Reply

Your email address will not be published. Required fields are marked *