‘ನಾನೇಕೆ ‘ಮೈತ್ರಿ’ ಸರ್ಕಾರ ಬೀಳಿಸಿದೆ..?’

ಮೈತ್ರಿ ಸರ್ಕಾರ ಬೀಳಲು ಮಾಜಿ ಸಿಎಂ ಸಿದ್ದರಾಮಯ್ಯರ ಕೊಬ್ಬು.  ಡಿ.ಕೆ.ಶಿವಕುಮಾರ್​ ಅವರ ಭ್ರಷ್ಟಾಚಾರ ಕಾರಣ ಎಂದು ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ‌ ಆರೋಪಿಸಿದ್ದಾರೆ. ಸಿದ್ದರಾಮಯ್ಯ-ಸತೀಶ್ ಜಗಳದಲ್ಲಿ ನಾನು ಮಂತ್ರಿಯಾದೆ. ನಗರದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ‌, ನಾನು ಅನಿವಾರ್ಯವಾಗಿ ಬಿಜೆಪಿ ಸೇರಬೇಕಾಯಿತು. ನನ್ನ ವಿರೋಧಿಗಳು ಹೋರಾಟಗಾರರಲ್ಲ, ಅವರು ಕುತಂತ್ರಿಗಳು. ನಾವು ಸಿದ್ದರಾಮಯ್ಯರನ್ನ ನಂಬಿ ರಾಜಕೀಯ ಮಾಡಿದ್ವಿ. ನಂತರ ಬಿಡದಿ ರೆಸಾರ್ಟ್​ನಲ್ಲಿ ಡಿ.ಕೆ.ಶಿವಕುಮಾರ್​ ವರ್ತನೆ ನೋಡಿದೆ. ಆಗಲೇ ಸಮ್ಮಿಶ್ರ ಸರ್ಕಾರ ಬೀಳಿಸಲು ನಿರ್ಧರಿಸಿದೆ. ನಾನು ಯಾರ ಚಮಚಾಗಿರಿಯೂ ಮಾಡಿಲ್ಲ. ಸಿದ್ದರಾಮಯ್ಯ, ಸತೀಶ್​ ನಡುವಿನ ಜಗಳದಲ್ಲಿ ನನ್ನನ್ನು ಮಂತ್ರಿ ಮಾಡಿದ್ರು ಅಂತಾ ಹೇಳಿದರು.

ಅದಾದ 3 ತಿಂಗಳ ನಂತರ ನನ್ನನ್ನ ಕೆಳಗಿಳಿಸಿ ರಾಜಕೀಯ ಜೀವನವನ್ನ ಮುಗಿಸಬೇಕು ಅಂತಾ ಕುತಂತ್ರ ನಡೆಸಿದ್ರು. ಹಿಂದುಳಿದ ವರ್ಗದ ನಾಯಕರು ಬೆಳೆಯಬಾರದು ಅನ್ನೋದೇ ಸಿದ್ದರಾಮಯ್ಯರ ಉದ್ದೇಶವಾಗಿತ್ತು ಅಂತಾ ವಾಗ್ದಾಳಿ ನಡೆಸಿದರು. ಕಳೆದ ವಿಧಾನಸಭೆ ಚುನಾವಣೆ ಮುಗಿದ ಬಳಿಕ ನಾವೆಲ್ಲರೂ ಬೆಂಗಳೂರಿಗೆ ಹೋಗಬೇಕಿತ್ತು. ಆದ್ರೆ ನಮಗಿಂತ ಮೊದಲು ಮಹಾಂತೇಶ ಕೌಜಲಗಿ, ಲಕ್ಷ್ಮೀ ಹೆಬ್ಬಾಳ್ಕರ್ ಅಲ್ಲಿಗೆ ಹೋಗಿದ್ರು. ಆಗಲೇ ನನ್ನ ವಿರುದ್ಧ ಕುತಂತ್ರ ನಡೆದಿತ್ತು. ಜಿಲ್ಲೆಯಲ್ಲಿ ನಾನು ಪಕ್ಷ ಸಂಘಟನೆ ಮಾಡಿದ ತಕ್ಷಣ ಹೈಕಮಾಂಡ್​ನಲ್ಲಿ ಬೇರೆ ಚರ್ಚೆ ಆಯಿತು. ನಂತರ ಸತೀಶ್ ಜಾರಕಿಹೊಳಿ ಸಚಿವರಾದರು. ಅವರು ಸಚಿವರಾದ ತಕ್ಷಣ ನಾನು ಸರ್ಕಾರ ಬೀಳಿಸುವ ನಿರ್ಧಾರ ಕೈಗೊಂಡೆ. ಕಾಂಗ್ರೆಸ್ ನಾಯಕರ ಸೊಕ್ಕಿನಿಂದ ಪಕ್ಷ ಹಾಳಾಗಿದೆ. ಪಕ್ಷದಲ್ಲಿನ ಆಂತರಿಕ ಸಮಸ್ಯೆ ಹೇಳಿದ್ರೆ, ಭಿನ್ನಮತ ಎಂದು ಬಿಂಬಿಸುತ್ತಾರೆ ಎಂದು ಕಿಡಿಕಾರಿದರು. 

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮುಖಂಡ ಅಜಿತ್ ಪವಾರ್ ಅವರನ್ನು ಶಿವಸೇನೆ ಸಂಪರ್ಕಿಸಿದೆ. ಈ ವಿಚಾರವನ್ನು ಸ್ವತಃ ಅಜಿತ್ ಪವಾರ್ ಮಾಧ್ಯಮಗಳ ಜೊತೆಗೆ ಹಂಚಿಕೊಂಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಎನ್‌ಸಿಪಿ ಜೊತೆಗೆ ಮೈತ್ರಿ ಸಾಧಿಸಲು ಸರ್ವ ಪ್ರಯತ್ನವನ್ನು ಶಿವಸೇನೆ ನಡೆಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಜಿತ್ ಪವಾರ್, ಶಿವಸೇನೆ ನಾಯಕ ಸಂಜಯ್ ರಾವತ್ ಅವರಿಂದ ಸಂದೇಶ ಬಂದಿತ್ತು. ಆದರೆ ನಾನು ಸಭೆಯಲ್ಲಿ ಇದ್ದಿದ್ದರಿಂದ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ನನಗೆ ಸಂದೇಶ ಕಳುಹಿಸಿದ್ದಾರೆ. ಯಾಕೆ ಸಂದೇಶ ಕಳುಹಿಸಿದ್ದಾರೆ ಎನ್ನುವುದು ಗೊತ್ತಿಲ್ಲ. ಸ್ವಲ್ಪ ಸಮಯದ ನಂತರ ಅವರನ್ನು ಸಂಪರ್ಕಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸಂಜಯ್ ರಾವತ್, ಸರ್ಕಾರ ರಚಿಸಲು ನಮ್ಮ ಬಳಿ ಬಹುಮತವಿದೆ. 288 ಕ್ಷೇತ್ರಗಳ ಪೈಕಿ ನಮಗೆ 170 ಶಾಸಕರ ಬೆಂಬಲ ದೊರೆತಿದೆ. ನಾವು ಸ್ವತಂತ್ರವಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬಹುದು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿ ಜೊತೆಯಲ್ಲಿ 50:50 ಫಾರ್ಮುಲಾದಂತೆ ಸರ್ಕಾರ ರಚಿಸಿಬೇಕಿದೆ ಎಂದು ಹೇಳಿದ್ದರು. 

Leave a Reply

Your email address will not be published. Required fields are marked *