‘ಮೋದಿ ಚೋರ್ ಹೈ’ಎಂದವರಿಗೆ ಬಿಜೆಪಿಯಿಂದ ಟಿಕೆಟ್!! ಯಾರು ಗೊತ್ತಾ??

ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿರುವ ವಿಚಾರವಾಗಿ ಹೊಸಪೇಟೆ ಕಾರ್ಯಕರ್ತರು ಬಿಜೆಪಿ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಮೋದಿ ಚೋರ್ ಹೈ ಎಂದವರಿಗೆ ಯಾರಿಗೆ ಕೇಳಿ ಟಿಕೆಟ್ ನೀಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಉಪಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಇಂದು ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡ ಸಭೆ ಕರೆಯಲಾಗಿತ್ತು. ಪರಿಷತ್ ಸದಸ್ಯ ರವಿ ಕುಮಾರ್ ಅವರ ನೇತೃತ್ವದಲ್ಲಿ ಆರಂಭವಾದ ಸಭೆಯಲ್ಲಿ ಕಾರ್ಯಕರ್ತರು ನಾಯಕರಿಗೆ ಪ್ರಶ್ನೆಗಳ ಸುರಿಮಳೆಯನ್ನು ಎಸೆದರು. ಅಲ್ಲದೇ ಸಭೆಯಲ್ಲಿ ಅಸಮಾಧಾನ ಹೊರಹಾಕಿದ ಪರಿಣಾಮ ಮುಖಂಡ ನಡುವೆ ವಾಗ್ವಾದವೂ ಏರ್ಪಟ್ಟಿತ್ತು.

ಸಭೆ ಆರಂಭವಾಗುತ್ತಿದಂತೆ ಗಲಾಟೆ ಆರಂಭವಾದ ಕಾರಣ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪರಿಷತ್ ಸದಸ್ಯ ರವಿ ಕುಮಾರ್ ಸಭೆಯಿಂದ ಹೊರ ನಡೆದರು. ಇದಕ್ಕೂ ಮುನ್ನ ಅಸಮಾಧಾನಿತ ಮುಖಂಡರನ್ನು ಸಮಾಧಾನ ಮಾಡಲು ರವಿ ಕುಮಾರ್ ಹೈರಾಣರಾದರು. ನೂರಾರು ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಖಂಡರು ಮೌನ ವಹಿಸಿದ್ದು ಕಂಡು ಬಂತು. ಸದ್ಯ ಹೊಸಪೇಟೆಯಲ್ಲಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ ಪರಿಣಾಮ ಆನಂದ್ ಸಿಂಗ್ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. 

ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ನಾಯಕರ ಪಟ್ಟಿಯನ್ನು ಈ ತಂಡ ಸಿದ್ಧಪಡಿಸುತ್ತಿದೆ. ಹೋಟೆಲ್ ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಸಪ್ತ ತಂಡ ಮುಂದಾಗಿದೆ. ಪಕ್ಷದ ಮುಖಂಡರು ಎಂದು ಹೇಳಿಕೊಂಡು ಬೇರೆಯವರು ಸಭೆಗೆ ಹಾಜರಾಗಿದ್ದರಾ? ಸಿಸಿಟಿವಿಯಲ್ಲಿ ಸಭೆಯೊಳಗೆ ಮೊಬೈಲ್ ತಂದಿದ್ಯಾರು ಎಂಬುವುದು ಬಹುತೇಕ ಗೊತ್ತಾಗಲಿದೆ ಎನ್ನಲಾಗುತ್ತಿದೆ. ಸಪ್ತ ತಂಡ ಎಲ್ಲಾ ಆಯಾಮಗಳಲ್ಲಿ ಆಂತರಿಕ ತನಿಖೆ ಆರಂಭಿಸಿದೆ. ಪ್ರತಿ ಹಂತದ ತನಿಖೆಯ ಮಾಹಿತಿಯನ್ನು ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.

ಹುಬ್ಬಳ್ಳಿಯ ಸಭೆಯಲ್ಲಿ ಉತ್ತರ ಕರ್ನಾಟಕದ ಏಳು ಕ್ಷೇತ್ರಗಳ ಮುಖಂಡರು ಮತ್ತು ಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದರು. ಹಾಗಾಗಿ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಿಗೆ ತಮ್ಮನ್ನು ವಿಡಿಯೋ ಮಾಡಿದವರ ಗುಂಪಿನಲ್ಲಿ ಸೇರಿಸಿಕೊಂಡರೆ ಹೇಗೆ ಎಂಬ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಏಳು ಕ್ಷೇತ್ರಗಳ ನಾಯಕರು ವಿಡಿಯೋ ಬಿಡುಗಡೆ ಮಾಡಿದವರು ನಾವಲ್ಲ ಎಂದು ಸಿಎಂ ಅವರಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಒಂದು ವೇಳೆ ವಿಡಿಯೋ ಮಾಡಿದವರ ಗುಂಪಿನಲ್ಲಿ ನಮ್ಮ ಹೆಸರು ಸೇರಿದರೆ ಪಕ್ಷದಿಂದ ಉಚ್ಛಾಟಿಸಬಹುದು. ಸ್ಥಳೀಯಮಟ್ಟದಲ್ಲಿಯ ಗೌರವಕ್ಕೆ ಧಕ್ಕೆ ಆಗಬಹುದು. ಭವಿಷ್ಯದಲ್ಲಿ ಪಕ್ಷ ಯಾವುದೇ ಜವಾಬ್ದಾರಿ ಹುದ್ದೆ ನೀಡದಿದ್ದರೆ ಹೇಗೆ ಎಂಬ ಆತಂಕ ಸಭೆಯಲ್ಲಿ ಭಾಗಿಯಾಗಿದ್ದ ನಾಯಕರಲ್ಲಿ ಮನೆ ಮಾಡಿದೆ. ಹೀಗಾಗಿ ಎಲ್ಲರೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಯಡಿಯೂರಪ್ಪರನ್ನು ಸಂಪರ್ಕಿಸಿ ಸ್ಪಷ್ಟನೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. 

Leave a Reply

Your email address will not be published. Required fields are marked *