ಶಬರಿಮಲೆ ಪ್ರವೇಶಕ್ಕೆ ಸಂಭಂದಿಸಿದಾಗೆ ಮಹತ್ವದ ತೀರ್ಪೋಂದನ್ನು ತಂದ ಕೇರಳ ಸರ್ಕಾರ!!

ಶಬರಿಮಲೆ ಅಯ್ಯಪ್ಪನ ದರ್ಶನದ ವಿಚಾರದಲ್ಲಿ ಈ ಬಾರಿ ಹೋರಾಟಗಾರರು ಪ್ರವೇಶಕ್ಕೆ ಯತ್ನಿಸಿದ್ರೆ ಯಾವುದೇ ರಕ್ಷಣೆ ನೀಡಲ್ಲ ಅಂತಾ ಕೇರಳ ಸರ್ಕಾರ ತಿಳಿಸಿದೆ. ನಿನ್ನೆಯಷ್ಟೇ ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದ ನ್ಯಾಯಪೀಠ ಶಬರಿಮಲೆ ವಿವಾದ ಕುರಿತ ಮೇಲ್ಮನವಿಗಳನ್ನು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ. ಹೀಗಾಗಿ ಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡು ಹೋಗುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇರಳ ಸರ್ಕಾರದ ಸಚಿವ ಸುನೀಲ್ ಕುಮಾರ್, ಅಯ್ಯಪ್ಪನ ದರ್ಶನಕ್ಕೆ ಹೋಗುವ ಮಹಿಳೆಯರು ಸುಪ್ರೀಂ ಕೋರ್ಟ್​ ಆದೇಶವನ್ನ ಗಮನದಲ್ಲಿಟ್ಟುಕೊಳ್ಳಬೇಕಿದೆ. ಅವರಿಗೆ ವಿಶೇಷ ರಕ್ಷಣೆ ನೀಡುವ ಯಾವ ಆಲೋಚನೆಯೂ ಸರ್ಕಾರದ ಬಳಿ ಇಲ್ಲ ಎಂದಿದ್ದಾರೆ. 2018 ರಲ್ಲಿ ಸುಪ್ರೀಂಕೋರ್ಟ್ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈ ವೇಳೆ ಸಿಕ್ಕಾಪಟ್ಟೆ ಗಲಾಟೆಗಳು ನಡೆದಿದ್ದವು. ಹೀಗಾಗಿ 10,017 ಮಂದಿ ಪೊಲೀಸರನ್ನ ಪಂಬಾ ಹಾಗೂ ನಿಲಕಲ್​​, ಎರುಮೆಲಿನಲ್ಲಿ ನಿಯೋಜಿಸಲು ನಿರ್ಧರಿಸಿದೆ. ಆದರೆ ಹೋರಾಟಗಾರರಿಗೆ ಯಾವುದೇ ರಕ್ಷಣೆ ನೀಡದಿರಲು ಪೊಲೀಸರು ನಿರ್ಧರಿಸಲಾಗಿದೆ. ಕೇವಲ ಮಹಿಳಾ ಹೋರಾಟಗಾರರಲ್ಲದೇ, ರಾಜಕೀಯ ನಾಯಕರಿಗೂ ಯಾವುದೇ ರಕ್ಷಣೆಯ ಜವಾಬ್ದಾರಿಯನ್ನ ನೀಡಲ್ಲ ಅಂತಾ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಶಬರಿಮಲೆ ಹೋರಾಟಗಾರ ಸ್ಥಳವಲ್ಲ. ಈ ವಿಚಾರದಲ್ಲಿ ಹೋರಾಟಗಾರರಿಗೆ LDF ಸರ್ಕಾರ ಬೆಂಬಲ ನೀಡಲ್ಲ. ಶಬರಿಮಲೆ ಬಾಗಿಲು ತೆರೆಯುವ ಕೆಲವು ಮಹಿಳಾ ಹೋರಾಟಗಾರರು ಪ್ರವೇಶ ಮಾಡೋದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ನಾವು ಅವರಿಗೆ ಪ್ರಚಾರ ಕೊಡಲ್ಲ, ಜೊತೆಗೆ ರಕ್ಷಣೆಯನ್ನೂ ನೀಡಲ್ಲ ಅಂತಾ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ. 

ಹುಬ್ಬಳ್ಳಿಯ ಸಭೆಯಲ್ಲಿ ಸಿಎಂ ಯಡಿಯೂರಪ್ಪನವರು ಮಾತನಾಡಿದ್ದ ಆಡಿಯೋ ಕುರಿತು ಬಿಜೆಪಿ ಆಂತರಿಕ ತನಿಖೆ ಆರಂಭಿಸಿದೆ. ಈ ಸಂಬಂಧ ಯಡಿಯೂರಪ್ಪನವರು ಏಳು ಸದಸ್ಯರ ತಂಡವೊಂದನ್ನು ರಚಿಸಿದ್ದಾರೆ ಎಂದು ತಿಳಿದು ಬಂದಿದೆ. ಹುಬ್ಬಳ್ಳಿಯ ಸಭೆಯಲ್ಲಿ ಉತ್ತರ ಕರ್ನಾಟಕದ ಏಳು ಕ್ಷೇತ್ರಗಳ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಏಳು ಕ್ಷೇತ್ರಗಳ ಮುಖಂಡರ ಚಲನವಲನದ ಮೇಲೆ ಕಣ್ಣಿಡುವಂತೆ ಯಡಿಯೂರಪ್ಪ ಸೂಚಿಸಿದ್ದಾರೆ. ರಚನೆಯಾಗಿರುವ ಸಪ್ತ ತಂಡ ಗೋಕಾಕ್, ಕಾಗವಾಡ, ಅಥಣಿ, ಹಿರೇಕೆರೂರು, ವಿಜಯನಗರ, ಯಲ್ಲಾಪುರ ಮತ್ತು ರಾಣೆಬೆನ್ನೂರು ಕ್ಷೇತ್ರಗಳ ಮುಖಂಡರ ಮೇಲೆ ರಹಸ್ಯ ರನಿಖೆ ಆರಂಭಿಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

Leave a Reply

Your email address will not be published. Required fields are marked *