ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಸಿಎಂ ಯಡಿಯೂರಪ್ಪ ಚಾಲನೆ.!

ಕಳೆದ ಒಂದು ದಶಕದಿಂದ ಜಿಲ್ಲೆಯ ಜನತೆ ಎದುರುನೋಡುತ್ತಿದ್ದ ನೂತನ ವಿಮಾನ ನಿಲ್ದಾಣಕ್ಕೆ ಇಂದು ಸಿಎಂ ಯಡಿಯೂರಪ್ಪ ಅವರು ಚಾಲನೆ ನೀಡದರು.

ಕಲಬುರಗಿಯಲ್ಲಿ ಸಾರ್ವಜನಿಕ ವಿಮಾನಯಾನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಜಿಲ್ಲೆಯ ಏರ್‌ಪೋರ್ಟ್‌ ಲೋಕಾರ್ಪಣೆಯಾಗಿದೆ. ಸಿಎಂ ಯಡಿಯೂರಪ್ಪ ಬೆಂಗಳೂರು ವಿಮಾನ ನಿಲ್ದಾಣದಿಂದ ವಿಮಾನದಲ್ಲಿ ಕಲಬುರಗಿಗೆ ಬಂದಿಳಿಯುವ ಮೂಲಕ ಪ್ರಯಾಣಕ್ಕೆ ಚಾಲನೆ ನೀಡಿದ್ದಾರೆ.

ಕಲಬುರಗಿಯಿಂದ ಬೆಂಗಳೂರಿಗೆ ಹೋಗಲು ರೈಲು ಅಥವಾ ಬಸ್‌ನಲ್ಲಿ ಬರೋಬ್ಬರಿ 12 ತಾಸು ಬೇಕಿತ್ತು. ಆದರೆ ಇದೀಗ ವಿಮಾನ ಹತ್ತಿ ಕುಳಿತುಕೊಂಡರೆ ಸಾಕು ಜಸ್ಟ್ ಒಂದೇ ತಾಸಿನಲ್ಲಿ ರಾಜಧಾನಿ ತಲುಪಬಹುದು.

ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ 1980ರಿಂದಲೇ ಕೂಗು ಆರಂಭಗೊಂಡಿತ್ತು. ಕೇವಲ ಗಣ್ಯರ ಪಾಲಿಗೆ ಏರ್‌ಪೋರ್ಟ್ ಮೀಸಲಾಗಿತ್ತು. ಈಗ ವಾಣಿಜ್ಯ ಹಾರಾಟಕ್ಕೂ ಮುಕ್ತವಾಗಿರೋದು ಜನ ಮೆಚ್ಚುವಂತಾಗಿದೆ. 3.175 ಕಿ.ಮಿ. ಉದ್ದದ ರನ್​ವೇ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣ ರಾಜ್ಯದ 2ನೇ ಹಾಗೂ ದೇಶದ 10ನೇ ಅತಿ ಉದ್ದದ ರನ್‌ ವೇ ಆಗಲಿದೆ.

ಕಲ್ಯಾಣ ಕರ್ನಾಟಕದ ಸುಮಾರು ಮೂರೂವರೆ ದಶಕದ ಕನಸು ಇಂದು ನನಸಾಗಿದೆ. ಕೊನೆಗೂ ನಮ್ಮೂರಿಗೆ ವಿಮಾನ ಬಂದಿಳಿದಿದ್ದನ್ನು ನೋಡಿ, ಇನ್ನ ಮೇಲೆ ನಾವು ಬೆಂಗಳೂರುಗೆ ವಿಮಾನದಲ್ಲಿ ಪ್ರಯಾಣಿಸಬಹುದು ಎಂದು ಖುಷಿಪಟ್ಟರು.

Leave a Reply

Your email address will not be published. Required fields are marked *